ನಾದ ಕಲ್ಯಾಣಿಯು ಕರ್ನಾಟಕ ಸಂಗೀತದಲ್ಲಿ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಸಂಗೀತ ಪ್ರಮಾಣ) ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃ‍‍‍‍ಷ್ಟಿಸಿರುವ ‍‍ಒಂದು ರಾಗವಾಗಿದೆ. ನಾದ ಕಲ್ಯಾಣಿ ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 65 ನೇ ಮೇಳಕರ್ತ ರಾಗವಾದ ಮೇಚಕಲ್ಯಾಣಿಯ ಜನ್ಯ ರಾಗವಾಗಿದೆ. ಈ ರಾಗವು ಪಾಶ್ಚಾತ್ಯ ಸಂಗೀತದ ಲಿಡಿಯನ್ ಮೋಡ್‌ಗೆ ಸಮನಾಗಿರುತ್ತದೆ ಆದರೆ ಆರೋಹಣದಲ್ಲಿ ನಾಲ್ಕನೇ ಮತ್ತು ಆರನೇ ಸ್ವರವನ್ನು ಬಿಟ್ಟುಬಿಡಲಾಗಿದೆ. ಈ ರಾಗವನ್ನು ಹಿಂದೂಸ್ತಾನಿ ಸಂಗೀತದಲ್ಲಿ ನಾದ ಕಲ್ಯಾಣ ಎಂದು ಮಹೇಶ್ ಮಹದೇವ್ ಹೆಸರಿಸಿದ್ದಾರೆ. == ರಚನೆ ಮತ್ತು ಲಕ್ಷಣ == ನಾದ ಕಲ್ಯಾಣಿ ಒಂದು ಅಸಂಪೂರ್ಣ ರಾಗವಾಗಿದ್ದು, ಆರೋಹಣದಲ್ಲಿ ಗಾಂಧಾರ ಮತ್ತು ಧೈವತವನ್ನು ಹೊಂದಿರುವುದಿಲ್ಲ. ಇದು ಔಡವ-ಸಂಪೂರ್ಣ ರಾಗಂ. ಈ ರಾಗದ ಆರೋಹಣ ಹಾಗೂ ಅವರೋಹಣ ಈ ಕೆಳಗಿನಂತಿರುತ್ತದೆ. ಆರೋಹಣ: ಸ ರಿ₂ ಮ₂ ಪ ನಿ₃ ಸ ಅವರೋಹಣ: Ṡ ನಿ₃ ದ₂ ಪ ಮ₂ ಗ₃ ರಿ₂ ಸ ಈ ರಾಗದಲ್ಲಿ ಬಳಸಲಾಗುವ ಸ್ವರಗಳೆಂದರೆ ಆರೋಹಣದಲ್ಲಿ ಷಡ್ಜ, ಚತುಶುರುತಿ ಋಷಬ, ಪಂಚಮ, ಪ್ರತಿಮಧ್ಯಮ, ಕಾಕಲಿ ನಿಷಾದ ಹಾಗೂ ಅವರೋಹಣದಲ್ಲಿ ಅಂತರ ಗಾಂಧಾರ ಮತ್ತು ಚತುಶ್ರುತಿ ದೈವತವನ್ನು ಸೇರಿಸಲಾಗಿಗುವುದು. ಇದು ಔಡವ-ಸಂಪೂರ್ಣ ರಾಗವಾಗಿದೆ. == ಸಂಯೋಜನೆಗಳು == ಈ ರಾಗದಲ್ಲಿ ಸಂಯೋಜನೆ ಶ್ರೀಹರಿ ಹೃದಯನಿವಾಸಿನಿ ಅಂಬಾ- ಮಹೇಶ್ ಮಹದೇವ್ ಗೀತೆ ರಚಿಸಿ ರಾಗ ಸಂಯೋಜಿಸಿದ್ದಾರೆ ಅಚ್ಯುತಮ್ ಕೇಶವಂ - ಮಹೇಶ್ ಮಹದೇವ್ ಸಂಯೋಜನೆ, ಪ್ರಿಯದರ್ಶಿನಿ ಹಾಡಿದ್ದಾರೆ ಕಾತ್ಯಾಯಿನಿ ವರಸುತನೆ - ಮಹೇಶ್ ಮಹದೇವ್ ಸಂಯೋಜಿಸಿದ್ದಾರೆ == ಉಲ್ಲೇಖಗಳು ==